Search This Blog

SHARE BUTTON ✅

ಈ ಮಾಹಿತಿ ಉಪಯುಕ್ತವಾಗಿದ್ದರೆ ? ಹಂಚಿಕೊಳ್ಳಿ 👇

📲 ವಾಟ್ಸಪ್  📘 ಫೇಸ್ಬುಕ್  📢 ಟೆಲಿಗ್ರಾಮ್

Tuesday, September 2, 2025

Ration Card: ರಾಜ್ಯದ ಪಡಿತರ ಚೀಟಿದಾರರು ಗಮನಿಸಲೇಬೇಕಾದ ಮಹತ್ವದ ಮಾಹಿತಿ

Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದು ಬರೀ ರೇಷನ್‌ ಪಡೆಯಲು ಅಷ್ಟೇ ಅಲ್ಲದೆ, ಆರೋಗ್ಯ ಸೇವೆಗಳು, ಸರ್ಕಾರಿ ಸೌಲಭ್ಯಗಳು ಸೇರಿದಂತೆ ಯಾವುದೇ ಅರ್ಜಿ ಸಲ್ಲಿಕೆಗೂ ಅತ್ಯಗತ್ಯವಾಗಿ ಬೇಕೇ ಬೇಕಾಗುತ್ತದೆ. ಇನ್ನು ಈ ಪಡಿತರ ಚೀಟಿ ಕುರಿತು ಆಗಾಗ ಅಪ್ಡೇಟ್‌ ಮಾಹಿತಿಗಳು ಲಭ್ಯ ಆಗುತ್ತಲಿರುತ್ತವೆ. ಹಾಗೆಯೇ ಈಗಾಗಲೇ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದ್ದು, ಇದಕ್ಕೆ ಕೊನೇ ದಿನಾಂಕ ಇಂದೇ ಆಗಿದೆ.

ರಾಜ್ಯದಲ್ಲಿ ಪಡಿತರ ಚೀಟಿ ತಿದ್ದುಪಡಿ ಕಾರ್ಯ ಆಗಸ್ಟ್‌ 1 ಆರಂಭ ಆಗಿದ್ದು, ಇಂದು ಅಂದ್ರೆ, ಆಗಸ್ಟ್‌ 31 ಕೊನೇ ದಿನವಾಗಿದೆ. ಒಂದು ವೇಳೆ ಈ ದಿನಾಂಕ ಮುಂದೂಡಿಕೆ ಆದರೂ, ಆಗಬಹುದು. ಹಾಗಾದ್ರೆ ಅರ್ಜಿ ಸಲ್ಲಿಕೆಗೆ ಯಾವೆಲ್ಲಾ ದಾಖಲೆಗಳು ಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಇನ್ನು ಇದೀಗ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಇಂದು ಕೊನೇ ದಿನವಾಗಿದೆ. ಪಡಿತರ ಚೀಟಿದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಅವಕಾಶ ನೀಡಲಾಗಿದೆ. ಬೆಂಗಳೂರು ಒನ್, ಸೈಬರ್ ಸೆಂಟರ್‌ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಸರ್ಕಾರಿ ಅಧಿಕೃತ ವೆಬ್ ಸೈಟ್ ಸ್ವಯಂ ಆಗಿ ಭೇಟಿ ಅರ್ಜಿ ಸಲ್ಲಿಕೆ ಮಾಡಬಹುದು. ಎಪಿಎಲ್ ಕಾರ್ಡ್ ಪಡೆಯುವವರು ಸಹ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆ ಮಾಡಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ https://ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಏನೆಲ್ಲಾ ತಿದ್ದುಪಡಿ ಮಾಡಬಹುದು?
* ಪೋಟೋ ಬದಲಾವಣೆ
* ಹೆಸರು ತೆಗೆದುಹಾಕುವಿಕೆ
* ನ್ಯಾಯಬೆಲೆ ಅಂಗಡಿ ನಂಬರ್ ಬದಲಾವಣೆ
* ಹೆಸರು ತಿದ್ದುಪಡಿ
* ಸದಸ್ಯರ ಹೆಸರು ಸೇರ್ಪಡೆ ಹಾಗೂ ತೆಗೆದುಹಾಕುವಿಕೆ

Recommended For You
1ರಿಂದ 7ನೇ ತರಗತಿಯ ಮಕ್ಕಳಿಗೆ “ರೂಮ್ ಟು ರೀಡ್” ಸುತ್ತೋಲೆ: ಹೊಸ ವಿವಾದ! 
"1ರಿಂದ 7ನೇ ತರಗತಿಯ ಮಕ್ಕಳಿಗೆ “ರೂಮ್ ಟು ರೀಡ್” ಸುತ್ತೋಲೆ: ಹೊಸ ವಿವಾದ! "
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು
* ಸದಸ್ಯರ ಆಧಾರ ಕಾರ್ಡ್
* ಸದಸ್ಯರ ಜಾತಿ ಮತ್ತು ಆದಾಯ 6 ವರ್ಷ ಮೆಲ್ಪಟ್ಟವರಿಗೆ
* ಜನನ ಪ್ರಮಾಣ ಪತ್ರ 6 ವರ್ಷದ ಒಳಗಿನ ಮಕ್ಕಳಿದ್ದರೆ ಮಾತ್ರ
* ಆಧಾರ್ ಕಾರ್ಡ್
* ವಿವಾಹ ಪ್ರಮಾಣ ಪತ್ರ
* ಪೋಷಕರ ಪಡಿತರ ಚೀಟಿ ಅಗತ್ಯ


ಮಗುವಿನ ಹೆಸರು ಸೇರ್ಪಡೆಗೆ ಬೇಕಾದ ದಾಖಲೆಗಳು
* ಮಗುವಿನ ಜನನ ಪ್ರಮಾಣಪತ್ರ
* ಪೋಷಕರ ಆಧಾರ್ ಕಾರ್ಡ್

* ಆನ್‌ಲೈನಲ್‌ನಲ್ಲಿ ಪಡಿತರ ಚೀಟಿಗೆ ನಿಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಲು ನೀವು ನಿಮ್ಮ ರಾಜ್ಯದ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು

You May Also Like
ರೈತರಿಗೆ ಭರ್ಜರಿ ಗುಡ್‌ ನ್ಯೂಸ್;‌ ಲಕ್ಷಾಂತರ ರೈತರಿಗೆ ಕೊಟ್ಯಂತರ ರೂ ಸಾಲ ವಿತರಣೆ!
"ರೈತರಿಗೆ ಭರ್ಜರಿ ಗುಡ್‌ ನ್ಯೂಸ್;‌ ಲಕ್ಷಾಂತರ ರೈತರಿಗೆ ಕೊಟ್ಯಂತರ ರೂ ಸಾಲ ವಿತರಣೆ!"
* ನೀವು ಐಡಿಯನ್ನು ರಚನೆ ಮಾಡಬೇಕಾಗುತ್ತದೆ. ನಿಮ್ಮ ಐಡಿಯನ್ನು ಈಗಾಗಲೇ ರಚಿಸಿದ್ದರೆ, ನೀವು ಲಾಗಿನ್ ಆಗಬೇಕು.
* ನಿಮ್ಮ ಪಡಿತರ ಚೀಟಿಯ ವಿವರಗಳನ್ನು ಪರೀಶೀಲಿಸಬಹುದು. ಅದರಲ್ಲಿ ನೀವು ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ ಆಯ್ಕೆಯನ್ನು ಪಡೆಯುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿದರೆ, ನೀವು ಹೊಸ ಸದಸ್ಯರನ್ನು ಸೇರಿಸಲು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಜೊತೆಗೆ ಹೊಸ ಸದಸ್ಯರ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು.

* ಬಳಿಕ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ವಿವರಗಳು ಮತ್ತು ದಾಖಲೆಗಳನ್ನು ಭರ್ತಿ ಮಾಡಿದ ನಂತರ, ನೀವು ಫಾರ್ಮ್ ಅನ್ನು ಸಲ್ಲಿಸಬೇಕು. ಫಾರ್ಮ್ ಅನ್ನು ಸಲ್ಲಿಸಿದ ನಂತರ, ನಿಮ್ಮ ನೋಂದಣಿ ಸಂಖ್ಯೆಯನ್ನು ನೀವು ಪಡೆಯುತ್ತೀರಿ. ನೋಂದಣಿ ಸಂಖ್ಯೆಯೊಂದಿಗೆ ನಿಮ್ಮ ವಿನಂತಿಯನ್ನು ನೀವು ಟ್ರ್ಯಾಕ್ ಮಾಡಬಹುದು.

* ನಂತರ ನಿಮ್ಮ ಫಾರ್ಮ್ ಮತ್ತು ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಎಲ್ಲವೂ ಸರಿಯಾಗಿ ಇದ್ದರೆ ಹೊಸ ಸದಸ್ಯರ ಹೆಸರನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡಲಾಗುವುದು. ಹತ್ತಿರದ ಪಡಿತರ ಅಂಗಡಿಗೆ ಹೋಗುವ ಮೂಲಕ ನಿಮ್ಮ ಪಡಿತರ ಚೀಟಿಯಲ್ಲಿ ನಿಮ್ಮ ಹೆಸರನ್ನು ಅಪ್ಡೇಟ್‌ ಮಾಡಿಸಬಹುದು. ದಾಖಲೆಗಳೆಲ್ಲ ಸರಿಯಾಗಿದ್ದರೆ, ತಿದ್ದುಪಡಿಯಾದ ಹೊಸ ರೇಷನ್‌ ಕಾರ್ಡ್‌ ನಿಮ್ಮ ಕೈಗೆ ತಲುಪಲಿದೆ.

No comments:

Post a Comment

Ration Card: ರಾಜ್ಯದ ಪಡಿತರ ಚೀಟಿದಾರರು ಗಮನಿಸಲೇಬೇಕಾದ ಮಹತ್ವದ ಮಾಹಿತಿ

Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದು ಬರೀ ರೇಷನ್‌ ಪಡೆಯಲು ಅಷ್ಟೇ ಅಲ್ಲದೆ, ಆರೋಗ್ಯ ಸೇವೆಗಳು, ಸರ್ಕಾರಿ ಸೌಲಭ್ಯಗಳು ಸ...